By Gowri Bhat
ಲೈಫ್ ಇಷ್ಟೇನೇ
ಹೊಸ ಕನಸು ಹೊಸತನ ನಮದಾಗಬೇಕು
ಹೊಸ ಚಿಗುರು ಹೊಸನಗು ಬೆಳಗಬೇಕು
ಹೊಸ ಕನಸು ಹೊಸ ಗುರಿ ಸಾಧಿಸಬೇಕು
ಎಂದಿಗೂ ಬಾಳಲ್ಲಿ ತಾಳ್ಮೆ ಇರಬೇಕು
ಒಂದಾಗಿ ಬೆರೆತು ಬಾಳ್ವೆ ಮಾಡಬೇಕು
ಲೈಫ್ ಲೈಫ್ ಲೈಫ್ ಇಷ್ಟೇನೆ
ಅಪ್ಪ ಅಮ್ಮ ಅಜ್ಜಿ ತಾತ
ಅಕ್ಕ ತಮ್ಮ ಅಣ್ಣ ತಂಗಿ
ಅತ್ತೆ ಮಾವ ಗಂಡ ಹೆಂಡತಿ ಮಕ್ಕಳು
ಇವರ ಕೂಡಿ ಬಾಳಬೇಕು
ನಾವೆಲ್ಲ ಸೇರಿ ಹಬ್ಬ ಆಚರಿಸಬೇಕು
ನಮ್ಮ ಸಂಸ್ಕೃತಿ ಕಲಿಯಬೇಕು
ಲೈಫ್ ಲೈಫ್ ಲೈಫ್ ಇಷ್ಟೇನೇ
ಮೊಬೈಲ್ ಫೋನ್ ಪಕ್ಕಕ್ಕೆ ಇಡಬೇಕು
ಎಲ್ಲರ ಜೊತೆ ಕೂಡಿ ಬಾಳಬೇಕು
ಸಂತೋಷದಿಂದ ಹಾಡಿ ಕುಣಿಯಬೇಕು
ಎಂದೆಂದಿಗೂ ನಗುನಗುತಾ ಜೀವಿಸಬೇಕು
ಉತ್ಸಾಹದಿ ಜೀವಿಸಿ ಜಯಿಸಬೇಕು
ಲೈಫ್ ಲೈಫ್ ಲೈಫ್ ಇಷ್ಟೇನೇ
By Gowri Bhat
Very meaningful poem,very nicely written!
Great one
Great thoughts
Superb Gowri...
Great writing ✨